Objectives
ಸಂಸತ್ತಿನ ಧ್ಯೇಯೋದ್ದೇಶ
ಸಂಸತ್ತಿನ ಧ್ಯೇಯೋದ್ದೇಶ
• ಪ್ರಪ್ರಥಮವಾಗಿ ಆಗಮ ಪಠ್ಯಗ್ರಂಥಗಳನ್ನು ಕನ್ನಡೀಕರಣ ಮಾಡಿಸಿ ಮುದ್ರಣ ಮಾಡಿಸುವುದು ಅತ್ಯಂತ ಪ್ರಧಾನವಾಗಿದೆ.
• ಪರಸ್ಥಳಗಳಲ್ಲಿರುವ ಅನೇಕ ವೈಖಾನಸ ದೀಕ್ಷಾ ಕುಟುಂಬಿಗಳ ಮನೆಯಲ್ಲಿ ಅವರ ಪೂರ್ವಿಕರು ರಕ್ಷಣೆ ಮಾಡಿ ಇಟ್ಟಿರುವ ಪುರಾತನ ಆಗಮ ಗ್ರಂಥಗಳಿದ್ದಲ್ಲಿ ಅದನ್ನು ಸಂಗ್ರಹಿಸಿ ಪುನರ್ಮುದ್ರಣ ಮಾಡಿಸುವುದು ಅತ್ಯಂತ ಮುಖ್ಯ ಕಾರ್ಯವಾಗಿದೆ.
• ಚಿಕ್ಕ ಚಿಕ್ಕ ಪಠ್ಯಗಳನ್ನು ಮುದ್ರಣಮಾಡಿಸಿ ಅದನ್ನೇ ಆನ್ಲೈನ್/ಆಪ಼್ಲೈನ್ನಲ್ಲಿ ಆಸಕ್ತಿಯುಳ್ಳವರಿಗೆ ಅಧ್ಯಾಪನ ಮಾಡಿಸುವುದು.
• ಪ್ರತೀ ತಿಂಗಳಿಗೆ ಒಮ್ಮೆ ಎಲ್ಲಾ ಸದಸ್ಯರೂ ಸೇರಿ ಶಾಸ್ತ್ರ ವಿಚಾರವಾಗಿ ಚರ್ಚೆ ನಡೆಸಿ ಅದರಲ್ಲಿ ತೀರ್ಮಾನವಾಗುವ ವಿಷಯವನ್ನು ಶಾಸ್ತ್ರಾಧಾರ ಮೂಲಕ ನೀಡುವುದು.
• ದೇವಸ್ಥಾನಗಳಲ್ಲಿ ಬರಬಹುದಾದ ಸಮಸ್ಯೆಗಳಿಗೆ ಶಾಸ್ತ್ರಾಧಾರಗಳನ್ನು ಸಿದ್ಧಪಡಿಸುವುದು.
• ದೈವೀಕ/ಮಾನುಷ ಪ್ರಯೋಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಯೋಗ ಮಾಡಿಸುತ್ತಿರುವ ಆಚಾರ್ಯರಿಗೆ ಬರಬಹುದಾದ ಸಮಸ್ಯೆಗಳನ್ನು ಸರಿಪಡಿಸಲು ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ಚರ್ಚಿಸುವುದು.
• ಶಾಸ್ತ್ರವನ್ನು ಮುಂದಿನ ಪೀಳಿಗೆಗೆ ಉಳಿಸುವ/ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು.
• ಸಾಮೂಹಿಕ ಉಪನಯನ, ಸಾಮೂಹಿಕ ಷಷ್ಠ್ಯಬ್ಧಿಶಾಂತಿ, ಸಾಮೂಹಿಕ ಉಪಾಕರ್ಮ, ಸಾಮೂಹಿಕ ಮಹಾಲಯ ತರ್ಪಣ ಇನ್ನೂ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
• ಅರ್ಚಕರುಗಳಿಗೆ ಸನ್ಮಾನ, ಬಿರುದುಗಳನ್ನು ನೀಡುವುದು, ಮಾತೆಯರಿಗೆ ಸನ್ಮಾನ.
• ವಿವಿಧ ಆಗಮಗಳಲ್ಲಿ ಉತ್ತೀರ್ಣರಾದವರಿಗೆ ಅರ್ಹತಾಪತ್ರ ಪ್ರಧಾನ ಮಾಡುವುದು.
• ವಿದ್ಯಾರ್ಥಿಗಳಿಗೆ ಆಗಮೋಕ್ತ ಪ್ರಾಯೋಗಿಕ ತರಬೇತಿಗಳನ್ನು ನೀಡಿ ಅರ್ಹತಾಪತ್ರವನ್ನು ನೀಡುವುದು.
• ರಾಜ್ಯಾದ್ಯಂತ ಇರುವ ದೇವಾಲಯಗಳ ಅರ್ಚಕರ ಮಕ್ಕಳುಗಳನ್ನು ಆಗಮ ವಿದ್ಯಾಭ್ಯಾಸಕ್ಕಾಗಿ ಪ್ರಚೋದಿಸಿ ಅವರನ್ನು ಪಾಠಶಾಲೆಗೆ ಸೇರುವಂತೆ ಮಾಡಿ ಸಂಬಂಧಪಟ್ಟ ಪಠ್ಯಗಳನ್ನು ಅಧ್ಯಯನ ಮಾಡಿಸುವುದು.
• ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು.
• ವಿವಿಧ ದೇವಾಲಯಗಳಲ್ಲಿ ಆಜೀವ ಪರ್ಯಂತವಾಗಿ ಸ್ವಾಮಿಯ ಸೇವೆ ಮಾಡುತ್ತಾ ಸಾರ್ಥಕ್ಯ ಜೀವನವನ್ನು ನಡೆಸಿಹೋದ ಅರ್ಚಕರ ಜೀವನ ಚರಿತ್ರೆಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಒಂದು ಗ್ರಂಥವನ್ನು ಹೊರತರುವುದು.
• ಸೇವಾ ಮನೋಭಾವನೆಯುಳ್ಳ ಸ್ವಯಂಸೇವಕರನ್ನು, ಅವರವರ ಇಚ್ಛೆಗೆ ಅನುಗುಣವಾಗಿ ನೇಮಕ ಮಾಡಿಕೊಂಡು ಈ ಕೆಳಕಂಡಂತೆ ಅವರನ್ನು ನಿಯೋಜಿಸಲಾಗುವುದು.
• ಯಾವುದೇ ತ್ರಿಮತಸ್ಥ ಬ್ರಾಹ್ಮಣರ ಮನೆಯವರು (ವೈಖಾನಸರಿಗೆ ಪ್ರಥಮ ಆದ್ಯತೆ) ಅಪೇಕ್ಷೆ ಪಟ್ಟಲ್ಲಿ ತಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಶುಭ ಸಮಾರಂಭಗಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೇ ಸ್ವ-ಇಚ್ಛೆಯಿಂದ ಸಹಾಯ ಮಾಡುವ ವಾಲೆಂಟಿಯರ್ಗಳನ್ನು ಕಳಿಸಿಕೊಡಲಾಗುವುದು. (ಉದಾ:- ಮದುವೆ, ಮುಂಜಿ ಸಮಾರಂಭಗಳಿಗೆ)
• ಯಾವುದೇ ತ್ರಿಮತಸ್ಥ ಬ್ರಾಹ್ಮಣರ ಮನೆಯಲ್ಲಿ ಬಂದೊದಗಬಹುದಾದ ಕಷ್ಟ ಸಂದರ್ಭದಲ್ಲಿ ಮೇಲಿನಂತೆಯೇ ವಾಲೆಂಟಿಯರ್ಗಳನ್ನು ಕಳಿಸಿಕೊಡಲಾಗುವುದು. (ವೈಖಾನಸರಿಗೆ ಪ್ರಥಮ ಆದ್ಯತೆ) (ಉದಾ:- ಆಸ್ಪತ್ರೆಗೆ ಸೇರಿಸುವ ಸಂದರ್ಭವಾಗಬಹುದು, ಔಷಧಿ-ಊಟ ತಂದು ಕೊಡುವ ಉಪಚಾರವಾಗಬಹುದು, ವಾಹನ ಸೌಲಭ್ಯವಾಗಬಹುದು, ಇನ್ನಿತರ ಯಾವುದೇ ಕಷ್ಟ ಸಂದರ್ಭಗಳಲ್ಲಿ, ಇತ್ಯಾದಿ)
• ಹುಟ್ಟು-ಅನಿಶ್ಚಿತ, ಸಾವು-ನಿಶ್ಚಿತ ಅಂತೆಯೇ ಯಾರದೇ ಮನೆಯಲ್ಲಾದರೂ ಯಾರೇ ದೈವಾಧೀನರಾದರೂ, ಅಂತಹ ಸಂದರ್ಭದಲ್ಲಿ ದಹನಾದಿ-ವೈಕುಂಠ ಸಮಾರಾಧನೆಯವರೆಗೆ ವಾಲೆಂಟಿಯರ್ಗಳನ್ನು ಕಳಿಸಿಕೊಡಲಾಗುವುದು. (ವೈಖಾನಸರಿಗೆ ಪ್ರಥಮ ಆದ್ಯತೆ) (ಉದಾ:- ಕರ್ಮವನ್ನು ಮಾಡಿಸುವವರು, ಉತ್ತರಕ್ರಿಯಾದಿ ಪದಾರ್ಥಗಳನ್ನು ತರುವುದು, ಸ್ಮಶಾನದಲ್ಲಿ ಸೌದೆ ಇತ್ಯಾದಿ ವ್ಯವಸ್ಥೆ, ಆಂಬುಲೆನ್ಸ್, ಶವ ಸಾಗಿಸುವ ವಾಹನ ವ್ಯವಸ್ಥೆ, ಊಟದ ವ್ಯವಸ್ಥೆ, ಧರ್ಮೋದಕದಿಂದ ಅಡಿಗೆಯವರಿಗೆ ಸಹಾಯ ಮಾಡುವುದು, ಶ್ರಾದ್ಧಾದಿಗಳಲ್ಲಿ ಮಡಿಯಿಂದ ಅಡುಗೆ ಮಾಡಲು ಸಹಾಯ, ಬ್ರಾಹ್ಮಣರ ವ್ಯವಸ್ಥೆ ಇತ್ಯಾದಿ...)
• ಕಷ್ಟಕಾಲದಲ್ಲಿ ಸಹಾಯವಾಗುವ ಸಲುವಾಗಿ ಒಂದು ಸಣ್ಣ ಚೀಟಿಯನ್ನು ನಡೆಸುವುದು, ಇದರಲ್ಲಿ ಬರುವ ಒಂದು ತಿಂಗಳ ಹಣವನ್ನು ಮೇಲಿನ ಯಾವುದಾದರು ಶುಭ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುವುದು.
• ಈ ಮಹತ್ಕಾರ್ಯಕ್ಕೆ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಬಯಸುವವರು ಇಂದಿನಿಂದಲೇ ತಮ್ಮ ಹೆಸರನ್ನು ಈ ಕೆಳಕಂಡವರಲ್ಲಿ ನೊಂದಾಯಿಸಿಕೊಳ್ಳುವುದು.
• ಈ ಮೇಲ್ಕಂಡ ಎಲ್ಲಾ ಕಾರ್ಯಗಳನ್ನು ನಮ್ಮ ಸಂಸತ್ತಿನಿಂದಲೇ ಮಾಡಲಾಗುವುದು. ಬೇರೆಯವರು ಇದನ್ನು ಯಾವುದೇ ತರಹ ನಕಲು ಮಾಡುವಂತಿಲ್ಲ. [Copyrights Reserved (ಹಕ್ಕುಸ್ವಾಮ್ಯ ಕಾಯ್ದಿರಿಸಲಾಗಿದೆ)].